ಫೆಬ್ರುವರಿ ೨೧ - ಫೆಬ್ರುವರಿ ತಿಂಗಳಿನ ಇಪ್ಪತ್ತೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೨ನೇ ದಿನ. ಈ ದಿನದ ನಂತರ ೩೧೩ ದಿನಗಳು (ಅಧಿಕ ವರ್ಷದಲ್ಲಿ ೩೧೪ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೮೪೮ - ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡೆರಿಕ್ ಎಂಗೆಲ್ಸ್ ತಮ್ಮ ಕಮ್ಯುನಿಷ್ಟ್ ಮ್ಯಾನಿಫೆಸ್ಟೊವನ್ನು ಪ್ರಕಟಿಸಿದರು. ೧೯೫೩ - ಫ್ರಾನ್ಸಿಸ್ ಕ್ರಿಕ್ ಮತ್ತು ಜೇಮ್ಸ್ ಡಿ. ವಾಟ್ಸನ್ರು ಡಿ ಎನ್ ಎ ರಚನೆಯನ್ನು ಪ್ರಕಟಿಸಿದರು. ೧೯೭೨ - ಸೋವಿಯೆಟ್ ಒಕ್ಕೂಟದ ಲೂನ ೨೦ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ನಿಲ್ದಾಣ ಮಾಡಿತು. ೧೯೫೨ - ಪೂರ್ವ ಪಾಕಿಸ್ತಾನದ ಡಾಕದಲ್ಲಿ ಬೆಂಗಾಲಿಯನ್ನು ರಾಷ್ಟ್ರಭಾಷೆಯನ್ನಾಗಿ ಸ್ಥಾಪಿಸಬೇಕೆಂದು ಕೋರಿಕೆಗೆ ಸೇರಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ಪೋಲಿಸ್ ಗುಂಡು ಹಾರಿಸಿದರು. == ಜನನ == ೧೮೩೬ - ಲಿಯೊ ಡೆಲಿಬೆಸ್, ಫ್ರಾನ್ಸ್ನ ಸಂಗೀತ ನಿರ್ದೇಶಕ. ೧೮೭೮ - ದ ಮದರ್ (ಮಿರ್ರ ಅಲ್ಫಸ್ಸ), ಪಾಂಡಿಚೆರಿಯ ಆರೊವಿಲ್ನ ಸಂಸ್ಥಾಪಕಿ. ೧೯೨೪ - ರಾಬರ್ಟ್ ಮುಗಾಬೆ, ಜಿಂಬಾಬ್ವೆಯ ಮೊದಲ ರಾಷ್ಟ್ರಪತಿ. == ನಿಧನ == ೧೬೭೭ - ಬಾರುಚ್ ಸ್ಪಿನೊಜ, ಡಚ್ ತತ್ವಶಾಸ್ತ್ರಜ್ಞ. ೧೯೬೫ - ಮಾಲ್ಕಮ್ ಎಕ್ಸ್, ಅಮೇರಿಕ ದೇಶದ ಕಪ್ಪು ಜನರ ಹಕ್ಕುಗಳ ಹೋರಾಟಗಾರ. == ಹಬ್ಬಗಳು/ಆಚರಣೆಗಳು == ಅಂತರರಾಷ್ಟ್ರೀಯ ಮಾತೃಭಾಷೆ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ